ಮೌನ ಕಾಡಿನ ಮಧ್ಯದೊಳಗೆ ಪಿಸುಗುಟ್ಟಿದೆಯೇ ಮಳೆಹನಿ,
ಸುರಿವ ಸೂರ್ಯನ ಸೋಸಿ ಹಿಡಿದಿದೆ ಎಲೆ ಎಲೆಯಲೂ ಇಬ್ಬನಿ,
ಮಲೆಯ ಮಂಚದಿಂದೆದ್ದು ಮೋಡವು ಮಂಪರಲಿ ಮೈಮುರಿದಿದೆ,
ಬಯಲು ನದಿಗಳ ದಾಟಿದೆ, ಅದು ಕಾಡು ಕೋಟೆಗಳ ಮೇಲೋಡಿದೆ,
ಮುಂಜಾನೆ ಮೆಲ್ಲನೆ ಮುಸುಕಿನಂತೀ ನಂದನದ ಮೇಲ್ಹರಿದಿದೆ,
ಅದರ ನಡುವೆ ಅಂಕುಡೊಂಕಾಗಿ ಒಂದೊಂಟಿದಾರಿಯು ಓಡಿದೆ,
ಆ ದಾರಿನದಿಯಲಿ ದ್ವೀಪದೋಣಿಗಳಂತೆ ನಾವೊಬ್ಬೊಬ್ಬರು,
ಶೂನ್ಯದಿಂದ ಸಾಗಿದೆವು ಮತ್ತೊಂದು ಶೂನ್ಯವ ಸೇರಲು.

No comments:
Post a Comment